11. ಇಗೋ, ಪ್ರಧಾನ ಯಾಜಕನಾದ ಅಮರ್ಯನು ಕರ್ತನ ಸಮಸ್ತ ಕಾರ್ಯಗಳಲ್ಲಿಯೂ ಯೆಹೂದದ ಮನೆಯ ನಾಯಕ ನಾಗಿರುವ ಇಷ್ಮಾಯೇಲನ ಮಗನಾದ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇದ್ದಾರೆ. ಇದ ಲ್ಲದೆ ಲೇವಿಯರೂ ನಿಮ್ಮ ಮುಂದೆ ಅಧಿಕಾರಿಗಳಾಗಿ ರುವರು. ನೀವು ಬಲಗೊಂಡು ಕೆಲಸ ನಡಿಸಿರಿ; ಕರ್ತನು ಒಳ್ಳೆಯವರ ಸಂಗಡ ಇರುವನು ಅಂದನು.