5. ಆದದರಿಂದ ಅವನು ಯಾಜ ಕರನ್ನೂ ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆನೀವು ಯೆಹೂದ ಪಟ್ಟಣಗಳಿಗೆ ಹೊರಟು ಹೋಗಿ ವರುಷ ವರುಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರಿಂದ ಹಣವನ್ನು ಕೂಡಿಸಿರಿ. ಕೆಲಸವನ್ನು ಶೀಘ್ರವಾಗಿ ನಡಿಸಿರಿ ಅಂದನು. ಆದಾಗ್ಯೂ ಲೇವಿಯರು ಅವಸರ ಮಾಡದೆ ಇದ್ದರು.