Home / Kannada / Kannada Bible / Web / Isaiah

 

Isaiah, Chapter 15

  
1. ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್‌ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್‌ ಹಾಳಾಗಿ ನಿಶ್ಯಬ್ಧವಾಯಿತು
  
2. ಬಯಿತ್‌ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
  
3. ಅವರು ತಮ್ಮ ಬೀದಿಗಳಲ್ಲಿ ಗೋಣೀತಟ್ಟನ್ನು ತಾವೇ ಸುತ್ತಿ ಕೊಳ್ಳುವರು; ಪ್ರತಿಯೊಬ್ಬನು ತಮ್ಮ ಮನೆಗಳ ಮೇಲೆ ಯೂ ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕ ದಿಂದ ಗೋಳಾಡುವನು.
  
4. ಹೆಷ್ಬೋನ್‌ ಮತ್ತು ಎಲೆ ಯಾಲೆ ಕೂಗುತ್ತವೆ; ಅವುಗಳ ಸ್ವರವು ಯಹಜಿನ ವರೆಗೂ ಕೇಳಿಸುತ್ತದೆ; ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು; ಅವನ ಪ್ರಾಣವು ತನ್ನೊಳಗೆ ತತ್ತರಿಸುತ್ತದೆ.
  
5. ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗು ತ್ತದೆ; ಅಲ್ಲಿಂದ ಪಲಾಯನವಾದವರು ಮೂರು ವರುಷದ ಕಡಸಿನಂತೆ ಚೋಯರಿಗೆ ಓಡಿಹೋಗು ವರು; ಲೂಹೀಥ್‌ ದಿಣ್ಣೆಯನ್ನು ಅಳುತ್ತಾ ಹತ್ತುತ್ತಾರೆ; ಯಾಕಂ ದರೆ ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಸ್ವರಗೈಯು ತ್ತಾರೆ.
  
6. ನಿವ್ರೆಾಮ್‌ ನೀರು ಹಾಳಾಯಿತು; ಹುಲ್ಲು ಬಾಡಿಹೋಗಿದೆ, ಹಸಿಹುಲ್ಲು ಮುಗಿಯಿತು, ಅಲ್ಲಿ ಹಸಿರಾದದ್ದು ಇಲ್ಲವೇ ಇಲ್ಲ.
  
7. ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
  
8. ಕೂಗಾಟವು ಮೋವಾಬಿನ ಎಲ್ಲೆ ಗಳ ತನಕ ಹಬ್ಬಿದೆ, ಅದರ ಕಿರಿಚಾಟ ಎಗ್ಲಯಿಮಿನ ವರೆಗೆ ಬೆಯೇರ್‌ ಏಲೀಮಿನ ವರೆಗೂ ವ್ಯಾಪಿಸಿದೆ.
  
9. ದೀಮೋನಿನ ನೀರೆಲ್ಲಾ ರಕ್ತವಾಯಿತು; ದೀಮೋ ನಿನ ಮೇಲೆ ಹೆಚ್ಚಾದದ್ದನ್ನು ತರುವೆನು; ಮೋವಾ ಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ ದೇಶ ದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.