Home / Kannada / Kannada Bible / Web / Psalms

 

Psalms, Chapter 100

  
1. ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ,
  
2. ಸಂತೋಷ ದಿಂದ ಕರ್ತನನ್ನು ಸೇವಿಸಿರಿ; ಹಾಡುತ್ತಾ ಆತನ ಮುಂದೆ ಬನ್ನಿರಿ.
  
3. ಕರ್ತನೇ ದೇವರೆಂದು ತಿಳುಕೊಳ್ಳಿರಿ; ನಾವಲ್ಲ, ಆತನೇ ನಮ್ಮನ್ನು ಉಂಟು ಮಾಡಿದ್ದಾನೆ; ನಾವು ಆತನ ಜನರೂ ಆತನ ಹುಲ್ಲುಗಾವಲಿನ ಮಂದೆಯೂ ಆಗಿದ್ದೇವೆ.
  
4. ಕೃತಜ್ಞತೆಯಿಂದ ಆತನ ಬಾಗಿಲುಗಳಿಗೂ ಸ್ತೋತ್ರದಿಂದ ಆತನ ಅಂಗಳಗಳಿಗೂ ಬನ್ನಿರಿ; ಆತನನ್ನು ಕೊಂಡಾಡಿರಿ, ಆತನ ಹೆಸರನ್ನು ಸ್ತುತಿಸಿರಿ.
  
5. ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.