Home / Kannada / Kannada Bible / Web / Psalms

 

Psalms, Chapter 113

  
1. ಕರ್ತನನ್ನು ಸ್ತುತಿಸಿರಿ; ಕರ್ತನ ಸೇವಕರೇ; ಸ್ತುತಿಸಿರಿ; ಕರ್ತನ ಹೆಸರನ್ನು ಸ್ತುತಿಸಿರಿ;
  
2. ಇಂದಿನಿಂದ ಯುಗಯುಗಕ್ಕೂ ಕರ್ತನ ಹೆಸರಿಗೆ ಸ್ತುತಿಯುಂಟಾಗಲಿ.
  
3. ಸೂರ್ಯೋದಯ ದಿಂದ ಅದರ ಅಸ್ತಮಾನದ ವರೆಗೂ ಕರ್ತನ ಹೆಸರು ಸ್ತುತಿಸಲ್ಪಡತಕ್ಕದ್ದು.
  
4. ಕರ್ತನು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವನು; ಆತನ ಮಹಿಮೆಯು ಆಕಾ ಶಗಳ ಮೇಲೆ ಇದೆ.
  
5. ನಮ್ಮ ದೇವರಾದ ಕರ್ತನ ಹಾಗೆ ಯಾರಿದ್ದಾರೆ? ಉನ್ನತದಲ್ಲಿ ಆತನು ವಾಸಿಸುತ್ತಾನೆ.
  
6. ಆಕಾಶದ ಮೇಲೆಯೂ ಭೂಮಿಯ ಮೇಲೆಯೂ ದೃಷ್ಟಿ ಇಡುವದಕ್ಕೆ ಆತನು ತನ್ನನ್ನು ತಗ್ಗಿಸಿಕೊಳ್ಳುತ್ತಾನೆ.
  
7. ಅಧಿಪತಿಗಳ ಸಂಗಡವೂ ತನ್ನ ಜನರ ಅಧಿಪತಿಗಳ ಸಂಗಡವೂ ಕುಳ್ಳಿರಿಸುವದಕ್ಕೆ,
  
8. ಧೂಳಿನೊಳಗಿಂದ ದರಿದ್ರನನ್ನು ಏಳಮಾಡಿ ತಿಪ್ಪೆಯೊಳಗಿಂದ ಬಡವನನ್ನು ಎತ್ತುತ್ತಾನೆ.
  
9. ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.