Home / Kannada / Kannada Bible / Web / Psalms

 

Psalms, Chapter 11

  
1. ಕರ್ತನಲ್ಲಿ ನಾನು ಭರವಸವನ್ನು ಇಟ್ಟಿದ್ದೇನೆ; ಪಕ್ಷಿಯಂತೆ ನಿಮ್ಮ ಬೆಟ್ಟಕ್ಕೆ ಓಡು ಎಂದು ನನ್ನ ಪ್ರಾಣಕ್ಕೆ ನೀವು ಹೇಳುವದು ಹೇಗೆ?
  
2. ಇಗೋ, ದುಷ್ಟರು ಬಿಲ್ಲು ಬೊಗ್ಗಿಸಿ ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವದಕ್ಕೆ ತಮ್ಮ ಬಾಣವನ್ನು ಬಿಲ್ಲಿಗೆ ಹೂಡಿ ಸಿದ್ಧಮಾಡುತ್ತಾರೆ.
  
3. ಅಸ್ತಿವಾರಗಳೇ ನಿರ್ಮೂಲವಾದರೆ ನೀತಿವಂತನು ಏನು ಮಾಡಬಹುದು?
  
4. ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಕರ್ತನ ಸಿಂಹಾಸನವು ಪರಲೋಕದಲ್ಲಿ ಅದೆ; ಆತನ ಕಣ್ಣುಗಳು ದೃಷ್ಟಿಸುತ್ತವೆ; ಆತನ ರೆಪ್ಪೆಗಳು ಮನು ಷ್ಯನ ಮಕ್ಕಳನ್ನು ಶೋಧಿಸುತ್ತವೆ;
  
5. ಕರ್ತನು ನೀತಿ ವಂತನನ್ನು ಶೋಧಿಸುತ್ತಾನೆ; ಆದರೆ ದುಷ್ಟನನ್ನೂ ಬಲಾತ್ಕಾರ ಪ್ರಿಯನನ್ನೂ ಆತನ ಪ್ರಾಣವು ಹಗೆ ಮಾಡುತ್ತದೆ.
  
6. ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;
  
7. ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.