Home / Kannada / Kannada Bible / Web / Psalms

 

Psalms, Chapter 120

  
1. ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು.
  
2. ಓ ಕರ್ತನೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ ಮೋಸದ ನಾಲಿಗೆಯಿಂದಲೂ ಬಿಡಿಸು.
  
3. ಸುಳ್ಳಿನ ನಾಲಿಗೆಯೇ, ದೇವರು ನಿನಗೇನು ಮಾಡ ಬೇಕು? ಆತನು ನಿನಗೇನು ಕೊಡಬೇಕು?
  
4. ಪರಾ ಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳು ನಿನಗೆ ಕೊಡಲ್ಪಡಲಿ.
  
5. ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ!
  
6. ನನ್ನ ಪ್ರಾಣವು ಸಮಾಧಾನವನ್ನು ಹಗೆ ಮಾಡುವವರ ಸಂಗಡ ವಾಸಮಾಡಿ ಸಾಕಾಯಿತು.
  
7. ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.