Home / Kannada / Kannada Bible / Web / Psalms

 

Psalms, Chapter 133

  
1. ಇಗೋ, ಸಹೋದರರು ಒಂದಾಗಿ ವಾಸಮಾಡುವದು ಎಷ್ಟೋಒಳ್ಳೇದು! ಎಷ್ಟೋ ರಮ್ಯವಾದದ್ದು!
  
2. ಅದು ತಲೆಯ ಮೇಲಿದ್ದು ಗಡ್ಡದ ಮೇಲೆ ಅಂದರೆ ಆರೋನನ ಗಡ್ಡದ ಮೇಲೆ ಇಳಿದು ಅವನ ವಸ್ತ್ರಗಳ ಅಂಚಿನ ವರೆಗೂ ಇಳಿಯುವ ಶ್ರೇಷ್ಠ ತೈಲದ ಹಾಗೆಯೂ
  
3. ಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.