Home / Kannada / Kannada Bible / Web / Psalms

 

Psalms, Chapter 1

  
1. ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ
  
2. ಕರ್ತನ ನ್ಯಾಯ ಪ್ರಮಾಣದಲ್ಲಿ ಸಂತೋಷಿಸಿ ಅದನ್ನ್ನು ರಾತ್ರಿ ಹಗಲು ಧ್ಯಾನಿಸುವ ಮನುಷ್ಯನೇ ಧನ್ಯನು.
  
3. ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
  
4. ಭಕ್ತಿಹೀನರು ಹಾಗಲ್ಲ, ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ.
  
5. ಆದದರಿಂದ ಭಕ್ತಿಹೀನರು ನ್ಯಾಯತೀರ್ಪಿನಲ್ಲಿಯೂ ಪಾಪಿಗಳು ನೀತಿವಂತರ ಸಭೆಯಲ್ಲಿಯೂ ನಿಲ್ಲರು.
  
6. ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.