Home / Kannada / Kannada Bible / Web / Psalms

 

Psalms, Chapter 47

  
1. ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
  
2. ಮಹೋನ್ನತನಾದ ಕರ್ತನು ಭಯಂಕ ರನೂ ಭೂಮಿಯ ಮೇಲೆಲ್ಲಾ ಮಹಾಅರಸನೂ ಆಗಿದ್ದಾನೆ.
  
3. ಜನರನ್ನು ನಮ್ಮ ಕೆಳಗೂ ಜನಾಂಗಗಳನ್ನು ನಮ್ಮ ಪಾದಗಳ ಕೆಳಗೂ ಅಧೀನ ಮಾಡಿದ್ದಾನೆ.
  
4. ಆತನು ಪ್ರೀತಿಮಾಡುವ ಯಾಕೋಬನ ಘನತೆಯಾದ ನಮ್ಮ ಬಾಧ್ಯತೆಯನ್ನು ಆದುಕೊಳ್ಳುತ್ತಾನೆ--ಸೆಲಾ.
  
5. ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.
  
6. ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ;
  
7. ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ.
  
8. ಅನ್ಯಜನಾಂಗವನ್ನು ಆಳುತ್ತಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ.
  
9. ಜನರ ಅಧಿಪತಿಗಳು ಅಬ್ರಹಾಮನ ದೇವರ ಪ್ರಜೆಯ ಸಂಗಡ ಕೂಡಿ ಕೊಂಡಿದ್ದಾರೆ; ಭೂಮಿಯ ಗುರಾಣಿಗಳು ದೇವರ ವಶದಲ್ಲಿವೆ; ಆತನು ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದಾನೆ.