|
Ezra, Chapter 10
1. ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅಳುತ್ತಾ ದೇವರ ಆಲಯದ ಮುಂದೆ ಬಿದ್ದಿರಲು ಇಸ್ರಾಯೇಲ್ಯರಲ್ಲಿ ಸ್ತ್ರೀಯರೂ ಪುರುಷರೂ ಮಕ್ಕಳೂ ಮಹಾ ದೊಡ್ಡ ಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡರು. ಜನರು ಬಹಳವಾಗಿ ಅತ್ತರು.
2. ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
3. ಆದ ಕಾರಣ ನನ್ನ ಒಡೆಯನ ಯೋಚನೆಯ ಪ್ರಕಾರವಾ ಗಿಯೂ ನಮ್ಮ ದೇವರ ಆಜ್ಞೆಗೆ ನಡುಗುವವರ ಯೋಚ ನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ ಅವರಿಂದ ಹುಟ್ಟಿದವರನ್ನೂ ಹೊರಡಿಸಿ ಬಿಡಲು ನಮ್ಮ ದೇವರ ಸಂಗಡ ಒಡಂಬಡಿಕೆ ಮಾಡೋಣ; ಇದು ನ್ಯಾಯಪ್ರಮಾಣದ ಪ್ರಕಾರ ಮಾಡಲ್ಪಡಲಿ.
4. ನೀನು ಏಳು; ಯಾಕಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ಇರುವೆವು; ಧೈರ್ಯದಿಂದಿರು, ಅದನ್ನು ಮಾಡು ಅಂದರು.
5. ಆಗ ಎಜ್ರನು ಎದ್ದು, ಪ್ರಧಾನಯಾಜಕರೂ ಲೇವಿಯರೂ ಸಮಸ್ತ ಇಸ್ರಾ ಯೇಲ್ಯರೂ ಈ ಮಾತಿನ ಪ್ರಕಾರವಾಗಿ ಮಾಡಲು ಅವರು ಆಣೆ ಇಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
6. ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು.
7. ಆಗ ಸೆರೆಯ ಮಕ್ಕಳೆಲ್ಲರೂ ಯೆರೂಸಲೇಮಿಗೆ ಕೂಡಿ ಬರಬೇಕೆಂದು ಯೆಹೂದ ಮತ್ತು ಯೆರೂಸ ಲೇಮಿನಲ್ಲಿ ಎಲ್ಲೆಲ್ಲಿಯೂ ಪ್ರಕಟಿಸಿದರು.
8. ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ಯೋಚನೆಯ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ ಅವನ ಆಸ್ತಿಯಲ್ಲಾ ದಂಡವಾಗಿ ತಕ್ಕೊಳ್ಳಲ್ಪಡುವದೆಂದೂ ಅವನು ಸೆರೆಯಾಗಿ ಒಯ್ಯಲ್ಪಟ್ಟವರ ಕೂಟದಿಂದ ಹೊರಗೆ ಹಾಕಲ್ಪಡುವನೆಂದೂ ಸಾರಿದರು.
9. ಆಗ ಯೆಹೂದ ಮತ್ತು ಬೆನ್ಯಾವಿಾನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿ ದರು. ಅದು ಒಂಭತ್ತನೇ ತಿಂಗಳ ಇಪ್ಪತ್ತನೇ ದಿವಸ ವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೊಸ್ಕರವೂ ಮಳೆಗೋಸ್ಕರವೂ ನಡುಗಿ ಕೂತುಕೊಂಡಿದ್ದರು.
10. ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ--ನೀವು ಇಸ್ರಾಯೇಲ್ಯರ ಅಪರಾಧ ವನ್ನು ಅಧಿಕವಾಗಿ ಮಾಡಲು ಅನ್ಯಸ್ತ್ರೀಯರನು್ನು ಮದುವೆಮಾಡಿಕೊಂಡದ್ದರಿಂದ ಅಕೃತ್ಯ ಮಾಡಿದಿರಿ.
11. ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
12. ಆಗ ಸಭೆಯೆಲ್ಲಾ ಪ್ರತ್ಯುತ್ತರವಾಗಿ ದೊಡ್ಡ ಶಬ್ದ ದಿಂದ--ನೀನು ಹೇಳಿದ ಪ್ರಕಾರವೇ ನಾವು ಮಾಡ ಬೇಕು,
13. ಆದರೆ ಜನರು ಅನೇಕರು; ಇದು ಮಳೆಕಾಲ ವಾಗಿರುವದರಿಂದ ಹೊರಗೆ ಇರಲಾರೆವು; ಇದಲ್ಲದೆ ಇದು ಒಂದೆರಡು ದಿವಸದ ಕೆಲಸವಲ್ಲ. ಈ ಕಾರ್ಯ ದಲ್ಲಿ ದ್ರೋಹ ಮಾಡಿದ ನಾವು ಅನೇಕರಾಗಿದ್ದೇವೆ.
14. ಆದಕಾರಣ ದಯಮಾಡಿ--ಸಭೆಯಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಮತ್ತು ಈ ಕಾರ್ಯದ ನಿಮಿತ್ತ ನಮ್ಮ ದೇವರ ಉರಿಯುವ ಕೋಪವು ನಮ್ಮನ್ನು ಬಿಟ್ಟುಹೋಗುವ ವರೆಗೆ, ನಮ್ಮ ಪಟ್ಟಣಗಳಲ್ಲಿ ಅನ್ಯ ಸ್ತ್ರೀಯರನ್ನು ತಕ್ಕೊಂಡವರು ನೇಮಿಸಿದ ಕಾಲದಲ್ಲಿ ಬಂದು ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ ಅದರ ನ್ಯಾಯಾಧಿಪತಿಗಳೂ ಇರಲಿ ಅಂದರು.
15. ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು.
16. ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.
17. ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು.
18. ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ.
19. ಇವರು ತಮ್ಮ ಸ್ತ್ರೀಯರನ್ನು ಹೊರಡಿಸಿ ಬಿಡುವೆವೆಂದು ತಮ್ಮ ಕೈಕೊಟ್ಟು ತಾವು ಅಪರಾಧಸ್ತರಾದದರಿಂದ ಅಪರಾಧ ಕಳೆಯುವದಕ್ಕೆ ಮಂದೆಯಿಂದ ತಂದ ಒಂದು ಟಗ ರನ್ನು ಅರ್ಪಿಸಿದರು.
20. ಇಮ್ಮೇರನ ಕುಮಾರರಲ್ಲಿ ಹನಾನೀ,
21. ಜೆಬದ್ಯ, ಹಾರೀಮನ ಕುಮಾರರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.
22. ಪಷ್ಹೂರನ ಕುಮಾರರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾ ಯೇಲ್, ನೆತನೇಲ್, ಯೋಜಾಬಾದ್, ಎಲ್ಲಾಸ.
23. ಲೇವಿಯರಲ್ಲಿ ಸಹ ಯೋಜಾಬಾದ್, ಶಿವ್ಮೆಾ, ಕೆಲೀಟನೆಂಬ ಕೇಲಾಯ,
24. ಪೆತಹ್ಯ, ಯೆಹೂದ, ಎಲೀಯೆಜೆರ್. ಹಾಡುಗಾರರಲ್ಲಿ ಸಹ ಎಲ್ಯಾಷೀಬ್; ದ್ವಾರಪಾಲಕರಲ್ಲಿ ಶಲ್ಲೂಮ್, ಟೆಲೆಮ್, ಊರೀ.
25. ಇಸ್ರಾಯೇಲ್ಯರ ಪರೋಷ್ ಕುಮಾರರಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ, ಬೆನಾಯನು.
26. ಏಲಾಮನ ಕುಮಾರರಲ್ಲಿ ಮತ್ತನ್ಯ; ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್, ವಿಲೀಯ.
27. ಜತ್ತೂವಿನ ಕುಮಾರರಲ್ಲಿ ಎಲ್ಯೋವೇನ್ಯೆ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್, ಅಜೀಜಾ.
28. ಬೇಬೈನ ಕುಮಾರರಲ್ಲಿ ಯೊಹೋಹಾ ನಾನ್, ಹನನ್ಯ, ಜಬ್ಬೈ, ಅತ್ಲೈ.
29. ಬಾನೀಯ ಕುಮಾರರಲ್ಲಿ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್, ರಾಮೋತ್.
30. ಪಹತ್ ಮೋವಾಬ್ ಕುಮಾರರಲ್ಲಿ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್, ಮನಸ್ಸೆ.
31. ಹಾರೀಮನ ಕುಮಾರರಲ್ಲಿ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
32. ಬೆನ್ಯಾವಿಾನ್, ಮಲ್ಲೂಕ್, ಶೆಮರ್ಯ.
33. ಹಾಷೂ ಮನ ಕುಮಾರರಲ್ಲಿ ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿವ್ಮೆಾ.
34. ಬಾನೀಯ ಕುಮಾರರಲ್ಲಿ ಮಾದೈ, ಅಮ್ರಾಮ್, ಊವೇಲ್,
35. ಬೆನಾಯ, ಬೇದೆಯ, ಕೆಲೂಹು,
36. ವನ್ಯಾಹ, ಮೆರೇಮೋತ, ಎಲ್ಯಾಷೀಬ್
37. ಮತ್ತನ್ಯ, ಮತ್ತೆನೈ, ಶಿವ್ಮೆಾ, ಯಾಸೈ,
39. ಶೆಲೆಮ್ಯ, ನಾತಾನ್, ಅದಾಯ,
40. ಮಕ್ನದೆಬೈ, ತಾಷೈ, ಶಾರೈ,
41. ಅಜರೇಲ್, ಶೆಲೆಮ್ಯ, ಶೆಮರ್ಯ,
42. ಶಲ್ಲೂಮ್, ಅಮರ್ಯ, ಯೋಸೇಫ್,
43. ನೆಬೋನ ಕುಮಾರರಲ್ಲಿ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್, ಬೆನಾಯ.
44. ಇವರೆಲ್ಲರೂ ಅನ್ಯಸ್ತ್ರೀಯರನ್ನು ತಕ್ಕೊಂಡ ವರಾಗಿದ್ದರು; ಇವರಲ್ಲಿ ಕೆಲವರು ತಮಗೆ ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ತಕ್ಕೊಂಡವರಾಗಿದ್ದರು.
|
|
Text source: This text is in the public domain.
|
|
This project is based on delivering free-of-charge the Word of the Lord in all the world by using electronic means. If you want to contact us, you can do this by writing to the following e-mail: bible-study.xyz@hotmail.com |
|
|
SELECT VERSION
COMPARE WITH OTHER BIBLES
|
|