Bible Study: FrontPage




 

Jeremiah, Chapter 4

Bible Study - Jeremiah 4 - Kannada - Kannada Bible - Web
 
 
 
Comment!       Comment Disqus!
  
1. ಓ ಇಸ್ರಾಯೇಲೇ, ನೀನು ತಿರುಗಿಕೊಂಡರೆ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ; ನೀನು ನಿನ್ನ ಅಸಹ್ಯಗಳನ್ನು ನನ್ನ ಎದುರಿನಿಂದ ತೊಲಗಿಸಿದರೆ ಕದಲದೆ ಇರುವಿ.
  
2. ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.
  
3. ಕರ್ತನು ಯೆಹೂದದವರಿಗೂ ಯೆರೂಸಲೇಮಿ ನವರಿಗೂ ಹೀಗೆ ಹೇಳುತ್ತಾನೆ--ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಉಳಿರಿ; ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ.
  
4. ಕರ್ತನಿಗೋಸ್ಕರ ಸುನ್ನತಿ ಮಾಡಿಕೊಳ್ಳಿರಿ, ನಿಮ್ಮ ಹೃದಯಗಳ ಮುಂದೊಗಲನ್ನು ತೆಗೆದುಹಾಕಿರಿ; ಇಲ್ಲದಿದ್ದರೆ ನನ್ನ ಕೋಪವು ಬೆಂಕಿಯ ಹಾಗೆ ಹೊರಟು ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸ ಕೂಡದ ಹಾಗೆ ಉರಿಯುವದು.
  
5. ಯೆಹೂದದಲ್ಲಿ ಪ್ರಚಾರಪಡಿಸಿರಿ, ಯೆರೂಸ ಲೇಮಿನಲ್ಲಿ ಪ್ರಕಟಿಸಿರಿ, ದೇಶದಲ್ಲಿ ತುತೂರಿ ಊದಿ ರೆಂದು ಹೇಳಿರಿ; ಗಟ್ಟಿಯಾಗಿ ಕೂಗಿರಿ; ಕೂಡಿಕೊಂಡು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ ಎಂದು ಹೇಳಿರಿ.
  
6. ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ಹಿಂದಕ್ಕೆ ಹೋಗಿರಿ, ನಿಲ್ಲಬೇಡಿರಿ; ನಾನು ಉತ್ತರದಿಂದ ಕೇಡನ್ನೂ ದೊಡ್ಡ ನಾಶನವನ್ನೂ ತರುತ್ತೇನೆ.
  
7. ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
  
8. ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಗೋಳಾಡಿರಿ; ಕರ್ತನ ಕೋಪದ ಉರಿಯು ನಮ್ಮಿಂದ ಹಿಂತಿರುಗಲಿಲ್ಲ.
  
9. ಆ ದಿವಸದಲ್ಲಿ ಆಗುವದೇನಂದರೆ--ಅರಸನ ಹೃದಯವೂ ಸಾಮಂ ತರ ಹೃದಯವೂ ಹಾಳಾಗುವದು. ಯಾಜಕರು ಆಶ್ಚರ್ಯಪಡುವರು; ಪ್ರವಾದಿಗಳು ಭ್ರಮೆಗೊಳ್ಳು ವರು ಎಂದು ಕರ್ತನು ಅನ್ನುತ್ತಾನೆ.
  
10. ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?
  
11. ಆ ಸಮಯದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಹೇಳಲ್ಪಡುವದೇನಂದರೆ--ಒಣ ಗಾಳಿಯು ಅರಣ್ಯದ ಉನ್ನತ ಸ್ಥಳಗಳಿಂದ ನನ್ನ ಜನರ ಕುಮಾರಿಯ ಕಡೆಗೆ ಬರುತ್ತದೆ. ಅದು ತೂರುವದಕ್ಕೂ ಶುದ್ಧಮಾಡುವದಕ್ಕೂ ಆಗತಕ್ಕದ್ದಲ್ಲ.
  
12. ಅದಕ್ಕಿಂತ ತುಂಬ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವದು; ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯ ತೀರ್ಪುಗಳನ್ನು ಕೊಡುವೆನು.
  
13. ಇಗೋ, ಮೇಘಗಳ ಹಾಗೆ ಏರಿ ಬರುವನು; ಆತನ ರಥಗಳು ಬಿರುಗಾಳಿಯ ಹಾಗೆ ಇರುವವು, ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮಗೆ ಅಯ್ಯೋ, ಹಾಳಾದೆವು.
  
14. ಯೆರೂಸಲೇಮೇ, ನೀನು ರಕ್ಷಿಸಲ್ಪಡುವ ಹಾಗೆ ನಿನ್ನ ಹೃದಯವನ್ನು ಕೆಟ್ಟತನದಿಂದ ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರ ವರೆಗೆ ನಿನ್ನಲ್ಲಿ ತಂಗುವವು?
  
15. ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ; ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
  
16. ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯ ಪಡಿಸಿರಿ; ಏನಂದರೆ ಮುತ್ತಿಗೆ ಹಾಕುವವರು ದೂರ ದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ತಮ್ಮ ಸ್ವರವನ್ನೆತ್ತುತ್ತಾರೆ.
  
17. ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿ ದ್ದಾರೆ; ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು ಕರ್ತನು ಅನ್ನುತ್ತಾನೆ.
  
18. ನಿನ್ನ ಮಾರ್ಗಗಳು ನಿನ್ನ ಕ್ರಿಯೆಗಳು ಇವುಗಳನ್ನು ನಿನಗೆ ಉಂಟುಮಾಡಿದವು, ಇದು ನಿನ್ನ ಕೆಟ್ಟತನವೇ; ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ತಾಕುತ್ತದ್ದಲ್ಲವೋ?
  
19. ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.
  
20. ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
  
21. ಎಷ್ಟರ ವರೆಗೆ ನಾನು ಧ್ವಜವನ್ನು ನೋಡುತ್ತಾ ತುತೂರಿಯ ಶಬ್ದವನ್ನು ಕೇಳಲಿ?
  
22. ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
  
23. ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
  
24. ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು.
  
25. ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿಹೋಗಿದ್ದವು.
  
26. ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಅರಣ್ಯವಾಯಿತು; ಅದರ ಪಟ್ಟಣಗಳೆಲ್ಲಾ ಕರ್ತನ ಮುಂದೆಯೂ ಆತನ ಕೋಪದ ಉರಿಯ ಮುಂದೆಯೂ ಕೆಡವಲ್ಪಟ್ಟಿದ್ದವು.
  
27. ಕರ್ತನು ಹೀಗೆ ಹೇಳಿದ್ದಾನೆ--ದೇಶವೆಲ್ಲಾ ಹಾಳಾಗುವದು; ಆದಾಗ್ಯೂ ನಾನು ಅದನ್ನು ಪೂರ್ಣ ಮಾಡಿಲ್ಲ.
  
28. ಇದರ ನಿಮಿತ್ತ ಭೂಮಿಯು ದುಃಖಿಸುವದು; ಮೇಲಿರುವ ಆಕಾಶವು ಕಪ್ಪಾಗುವದು; ನಾನು ಅದನ್ನು ಹೇಳಿ ನಿಶ್ಚಯಿಸಿದ್ದೇನೆ; ಮಾನಸಾಂತರಪಡುವದಿಲ್ಲ; ಇಲ್ಲವೆ ಅದರಿಂದ ಹಿಂತಿರುಗುವದಿಲ್ಲ;
  
29. ರಾಹುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವದು; ಅಡವಿಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು; ಪಟ್ಟಣಗಳೆಲ್ಲಾ ಬಿಡಲ್ಪಡುವವು ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.
  
30. ನೀನು ಸೂರೆ ಯಾದಾಗ ಏನು ಮಾಡುವಿ? ನೀನು ಕಡು ಕೆಂಪುಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣ ಗಳಿಂದ ನಿನ್ನನ್ನು ಅಲಂಕರಿಸಿದರೇನು? ಮುಖಕ್ಕೆ ಬಣ್ಣ ಹಚ್ಚಿಕೊಂಡರೇನು? ವ್ಯರ್ಥವಾಗಿ ನೀನು ನಿನ್ನನ್ನು ಸೌಂದರ್ಯಳಾಗಿ ಮಾಡಿಕೊಳ್ಳುವಿ; ನಿನ್ನ ಪ್ರಿಯರು ನಿನ್ನನ್ನು ಅಸಹ್ಯಿಸುವರು; ನಿನ್ನ ಪ್ರಾಣವನ್ನು ಹುಡುಕುವರು.
  
31. ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.
  
32. ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನ್ಯಾಯವನ್ನು ಮಾಡುವವನೂ ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ ತಿಳಿದು ಹುಡುಕಿರಿ. ಸಿಕ್ಕಿದರೆ ಅವಳಿಗೆ ಮನ್ನಿಸುವೆನು.
  
33. ಅವರು--ಕರ್ತನು ಜೀವಿಸುತ್ತಾನೆಂದು ಹೇಳಿದರೂ ನಿಶ್ಚಯವಾಗಿ ಸುಳ್ಳಾಗಿಯೇ ಅವರು ಆಣೆ ಇಡುತ್ತಾರೆ.
  
34. ಓ ಕರ್ತನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇವೆಯ ಲ್ಲವೋ? ಅವರನ್ನು ಹೊಡೆದಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ಸಂಹರಿಸಿದಿ, ಆದರೆ ಶಿಕ್ಷೆ ಹೊಂದಲೊಲ್ಲದೆ ಇದ್ದರು; ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ; ಅವರು ಹಿಂತಿರುಗುವದಕ್ಕೆ ನಿರಾಕರಿಸಿದ್ದಾರೆ.
  
35. ಆದದರಿಂದ ನಾನು--ನಿಶ್ಚಯವಾಗಿ ಇವರು ಬಡವರು, ಬುದ್ಧಿ ಹೀನರು; ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ಅರಿಯರು.
  
36. ನಾನು ದೊಡ್ಡವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡು ವೆನು; ಅವರು ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ತಿಳಿದಿದ್ದಾರೆ; ಆದರೆ ಇವರು ಕೂಡ ನೊಗವನ್ನು ಮುರಿದು ಬಂಧನಗಳನ್ನು ಹರಿದು ಬಿಟ್ಟಿದ್ದಾರೆ.
  
37. ಹೀಗಿರುವದರಿಂದ ಅಡವಿಯ ಸಿಂಹವು ಅವರನ್ನು ಕೊಲ್ಲುವದು; ಸಂಜೆಯ ತೋಳವು ಅವರನ್ನು ಸೂರೆ ಮಾಡುವದು; ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವದು; ಅಲ್ಲಿಂದ ಹೊರಗೆ ಬರುವವ ರೆಲ್ಲರೂ ಸೀಳಲ್ಪಡುವರು; ಅವರ ದ್ರೋಹಗಳು ಬಹಳವಾಗಿವೆ; ಅವರ ಹಿಂತಿರುಗುವಿಕೆಯು ಹೆಚ್ಚಾಗಿದೆ.
  
38. ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ; ನಾನು ಅವರನ್ನು ತೃಪ್ತಿಪಡಿ ಸಿದ ಮೇಲೆ ಅವರು ವ್ಯಭಿಚಾರಮಾಡಿ ಸೂಳೆಯರ ಮನೆಗಳಲ್ಲಿ ಗುಂಪಾಗಿ ಕೂಡಿಕೊಂಡರು.
  
39. ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ.
  
40. ಇವುಗಳ ನಿಮಿತ್ತ ನಾನು ವಿಚಾರಿಸುವ ದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ? ಎಂದು ಕರ್ತನು ಅನ್ನುತ್ತಾನೆ.
  
41. ಅವಳ ಗೋಡೆಗಳನ್ನು ಏರಿರಿ, ಕೆಡಿಸಿರಿ; ಆದರೆ ಪೂರ್ಣವಾಗಿ ನಾಶಮಾಡಬೇಡಿರಿ. ಅವಳ ಕೋಟೆಯ ಉಪ್ಪರಿಗೆಗಳನ್ನು ತೆಗೆದುಬಿಡಿರಿ; ಅವು ಕರ್ತನವುಗಳಲ್ಲ.
  
42. ಇಸ್ರಾಯೇಲ್ಯನ ಮನೆತನದವರೂ ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾ ರೆಂದು ಕರ್ತನು ಅನ್ನುತ್ತಾನೆ.
  
43. ಕರ್ತನನ್ನು ಸುಳ್ಳುಗಾರ ನನ್ನಾಗಿ ಮಾಡಿ ಅವರು--ಆತನು ಅಂಥವನಲ್ಲ; ನಮ್ಮ ಮೇಲೆ ಕೇಡುಬಾರದು; ಇಲ್ಲವೆ ಕತ್ತಿಯನ್ನಾದರೂ ಬರವನ್ನಾದರೂ ನಾವು ನೋಡುವದಿಲ್ಲ.
  
44. ಪ್ರವಾದಿಗಳು ಗಾಳಿಯಾಗುವರು; ವಾಕ್ಯವು ಅವರಲ್ಲಿ ಇಲ್ಲ; ಅವರಿಗೆ ಹೀಗಾಗುವದು ಎಂದು ಹೇಳಿದ್ದಾರೆ.
  
45. ಆದ ದರಿಂದ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ಈ ಮಾತನ್ನಾಡುವದರಿಂದ ಇಗೋ, ನಾನು ನಿನ್ನ ಬಾಯಲ್ಲಿರುವ ನನ್ನ ಮಾತುಗಳನ್ನು ಬೆಂಕಿಯಾಗಿಯೂ ಈ ಜನರನ್ನು ಕಟ್ಟಿಗೆಯಾಗಿಯೂ ಮಾಡುವೆನು; ಅದು ಅವರನ್ನು ತಿಂದುಬಿಡುವದು.
  
46. ಇಗೋ, ಇಸ್ರಾಯೇಲ್ಯನ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆಂದು ಕರ್ತನು ಅನ್ನುತ್ತಾನೆ. ಅದು ಬಲವಾದ ಜನಾಂಗವು ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.
  
47. ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ; ಅವರೆಲ್ಲರೂ ಪರಾಕ್ರಮ ಶಾಲಿಗಳೇ.
  
48. ನಿನ್ನ ಕುಮಾರರು, ಕುಮಾರ್ತೆಯರು ತಿನ್ನತಕ್ಕ ನಿನ್ನ ಪೈರನ್ನೂ ರೊಟ್ಟಿಯನ್ನೂ ತಿನ್ನುವರು, ಕುರಿಗಳನ್ನೂ ದನಗಳನ್ನೂ ತಿನ್ನುವರು, ದ್ರಾಕ್ಷೇ ಗಿಡ ಗಳನ್ನೂ ಅಂಜೂರದ ಗಿಡಗಳನ್ನೂ ತಿನ್ನುವರು. ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಕತ್ತಿಯಿಂದ ಬಡವಾಗ ಮಾಡುವರು.
  
49. ಆದಾಗ್ಯೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣ ವಾಗಿ ಅಳಿಸಿಬಿಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ.
  
50. ನಮ್ಮ ದೇವರಾದ ಕರ್ತನು ಯಾಕೆ ನಮಗೆ ಇವುಗಳನ್ನೆಲ್ಲಾ ಮಾಡುತ್ತಾನೆಂದು ಅವರು ಹೇಳು ವಾಗ--ನೀನು ಅವರಿಗೆ--ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ ಎಂದು ಹೇಳಬೇಕು.
  
51. ಯಾಕೋಬನ ಮನೆತನದಲ್ಲಿ ಇದನ್ನು ತಿಳಿಸಿರಿ. ಯೆಹೂದದಲ್ಲಿ ಪ್ರಕಟಿಸಿರಿ, ಏನಂದರೆ
  
52. ಮೂಢರೇ, ಬುದ್ಧಿಹೀನ ಜನರೇ, ಕಣ್ಣುಗಳಿದ್ದು ನೋಡದವರೇ, ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ.
  
53. ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು.
  
54. ಆದರೆ ಈ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು; ಅವರು ತಿರುಗಿ ಬಿದ್ದು ಹೋಗಿಬಿಟ್ಟಿದ್ದಾರೆ.
  
55. ಇಲ್ಲವೆ ತಮ್ಮ ಹೃದಯದಲ್ಲಿ--ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡು ವಂಥ ಸುಗ್ಗಿಗೆ ನೇಮಕವಾದ ವಾರಗಳಲ್ಲಿ ನಮ್ಮನ್ನು ಕಾಪಾಡುವಂಥ ನಮ್ಮ ದೇವರಾದ ಕರ್ತನಿಗೆ ಭಯ ಪಡೋಣ ಎಂದು ಅಂದುಕೊಳ್ಳುವದಿಲ್ಲ.
  
56. ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಅವೆ; ನಿಮ್ಮ ಪಾಪ ಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಳೆದಿವೆ.
  
57. ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ; ಉರುಲು ಇಡುವವನ ಹಾಗೆ ಹೊಂಚು ಹಾಕುತ್ತಾರೆ; ಬೋನು ಹಾಕಿ ಮನುಷ್ಯರನ್ನು ಹಿಡಿಯು ತ್ತಾರೆ.
  
58. ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ ಅವರ ಮನೆಗಳು ಮೋಸದಿಂದ ತುಂಬಿಯವೆ. ಆದದರಿಂದ ಅವರು ದೊಡ್ಡವರೂ ಐಶ್ವರ್ಯವಂತರೂ ಆಗಿದ್ದಾರೆ;
  
59. ಕೊಬ್ಬಿದ್ದಾರೆ, ಪ್ರಕಾಶಿಸುತ್ತಾರೆ; ಹೌದು, ದುಷ್ಟರ ಕೃತ್ಯಗಳಿಗಿಂತ ವಿಾರಿ ಹೋಗಿದ್ದಾರೆ. ವ್ಯಾಜ್ಯ ವನ್ನು, ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವದಿಲ್ಲ; ಆದಾಗ್ಯೂ ಅವರು ಸಫಲವಾಗುತ್ತಾರೆ; ಬಡವರ ನ್ಯಾಯವನ್ನು ತೀರಿಸರು.
  
60. ಇವುಗಳ ನಿಮಿತ್ತ ನಾನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.
  
61. ಆಶ್ಚರ್ಯವೂ ಭಯಂಕರವೂ ಆದ ಕಾರ್ಯವು ದೇಶದಲ್ಲಿ ನಡೆಯು ತ್ತದೆ,
  
62. ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ?


Search in:
Terms:

Vote and Comment on Facebook:Recommend This Page:
Post on Facebook Add to your del.icio.us Digg this story StumbleUpon Twitter Google Plus Post on Tumblr Add to Reddit Pin this story Linkedin Google Bookmark Blogger
Insert Your Personal Insight:

Please do not make mean comments and follow the biblical and spiritual character of this forum. If, however unpleasant situations arise, we request to flag it to us in order to evaluate the situation.

Text source: This text is in the public domain.

This project is based on delivering free-of-charge the Word of the Lord in all the world by using electronic means. If you want to contact us, you can do this by writing to the following e-mail: bible-study.xyz@hotmail.com


SELECT VERSION

COMPARE WITH OTHER BIBLES