|
Psalms, Chapter 93
1. ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.
2. ನಿನ್ನ ಸಿಂಹಾಸನವು ಪೂರ್ವಕಾಲ ದಿಂದ ಸ್ಥಿರವಾಗಿದೆ; ಯುಗಯುಗದಿಂದ ನೀನು ಇದ್ದೀ.
3. ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.
4. ಬಹಳ ನೀರುಗಳ ಶಬ್ದಕ್ಕಿಂತಲೂ ಹೌದು, ಸಮುದ್ರದ ಬಲವಾದ ಅಲೆ ಗಳಿಗಿಂತಲೂ ಉನ್ನತದಲ್ಲಿ ಕರ್ತನು ಬಲಿಷ್ಠನಾಗಿ ದ್ದಾನೆ.
5. ನಿನ್ನ ಸಾಕ್ಷಿಗಳು ಬಹಳ ನಿಶ್ಚಯವಾದವುಗಳು; ಓ ಕರ್ತನೇ, ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.
|
|
Text source: This text is in the public domain.
|
|
This project is based on delivering free-of-charge the Word of the Lord in all the world by using electronic means. If you want to contact us, you can do this by writing to the following e-mail: bible-study.xyz@hotmail.com |
|
|
SELECT VERSION
COMPARE WITH OTHER BIBLES
|
|